Loading
Movie Nannedeya Haadu [2009]
Starring Anand, Ramya Barne, Chayasri
Music AT Ravish
Lyrics Venu, Umashankar, Guruvendra, Sridhar Koteshwara, V. Manohar
Director Guruvendra
Producer Sadashiva Rao
Release 2009
Music On Anand Audio
Nannedeya Haadu MP3 Songs Free Download

Song : Kanninali Sanneyali 

Singer : Nanditha
Lyrics : Sridhar Koteshwara

ಕಣ್ಣಿನಲಿ ಸನ್ನೆಯಲೀ  ಶುರುವಾಗಿರುವಾ ರಾಗಾ
ಹೊಸ ಭಾವದ ಆವೇಗ ಆಲಿಂಗನದಾ ಮೋಹ
ಆರಂಭದ ಆಮೋಧ ಈ ನನ್ನೆದೆ ಹಾಡೀಗಾ ||ಕಣ್ಣಿನಲಿ||

ಪದಗಳೇ ಇಲ್ಲದ ಪ್ರೇಮದ ಪಲ್ಲವಿ ಹಾಡಿದರೇನು ಇಂಪುಂಟು
ಹದವೆರಿದ ಹದಿಹರೆಯದಿ ಬೆರೆಯುವ ಒಲವಿನ ಭಾವನೆ ಯಾಕುಂಟು
ಈ ಸೃಷ್ಟಿಯಲಿ ಹೊಸ ಗಾನವಿದೆ ಈ ದೃಷ್ಟಿಯಲಿ ಹೊಸ ನೋಟವಿದೆ
ಅಗೋಚರ ನಿಲುವಿನ ತಂತ್ರವಿದೆ ಅಭಾದಿತ ಭಾವದ ಮಂತ್ರವಿದೆ
ಯಾರಿಗೆ ಯಾರಿಹರೋ ಯಾರಿದರಾ ಗುರುವೋ
ಯಾರದೋ ಜೀವವಿದೋ ಏನಿದರಾ ಗುರಿಯೋ ||ಕಣ್ಣಿನಲಿ||

ತಿಂಗಳ ಬೆಳಕಿನ ಬೆಳ್ಳಿಯ ಚಂದಿರ ಚಂದದಿ ತಾನು ನಗುತಿರುವಾ
ಅಂಗಳದೀ ತನ್ನಮ್ಮನ ಮಡಿಲಲಿ ಕಂದಮ್ಮನು ತಾ ಅಳುತಿರುವ
ನಗು ಅಳುವಿನ ಆರಂಭದಲಿ ಸುಖ ದುಃಖದ ಪ್ರಾರಂಭದಲಿ
ಆಸೆಯ ನಂಟಿನ ಗಂಟಿನಲಿ ನಿರಾಸೆಯು ಮೊಡಿದ ಮನಸಿನಲಿ
ಭರವಸೆಯಾ ರಾಗಾ ಬರಸೆಳೆದಾ ಯೋಗ
ಬಗೆ ಬಗೆಯಾದಾಗಾ ಈ ನನ್ನೆದೆ ಹಾಡೀಗಾ  ||ಕಣ್ಣಿನಲಿ||
Download Kanninali Lyrics in .PDF format

Did you enjoy this post? Why not leave a comment below and continue the conversation, or Subscribe to Feed and get articles like this delivered automatically to your Email or feed

0 comments

Post a CommentNo. of Visitors